Thursday, July 21, 2011

ಬಾ -

ಅಳುವ ಬಿತ್ತಿ ನಗುವ ಬೆಳೆಸಿ
ಉಳಿವ ಹೊನಲ ಹಲವು ಮಾಡಿ
ಎಡವಿ ತಡವಿ ಬೆಳಕ ಬಯಸಿ
ನಿಲುವ ಕಡಲ ಬಯಲು ಮಾಡಿ
ಅಳಿವ ಜೀವಕೆ ಕಳೆವ ಭಾವಕೆ
ನಲಿವ ಮೂಡಿಸು ಬಾ;

ಮಡಿಲ ಹರಡಿ ಹೃದಯ ಕೊಡವಿ
ಪುಟಿವ ಭಾವದ ಅಣಿಯ ಮಾಡಿ
ದೇವನಾಲಯ ಬೆಳಕಿನಾರತಿ
ಹೊಳೆಸಿ ಜೀವದ ಕಿರಣ ಪೋಣಿಸಿ
ಬಳಿವ ನಾವು ಬಣ್ಣ ಬಿತ್ತಿಯ
ಬೆರಗುಗೊಳಿಸುವ ಬಾ;

ಕುಣಿವ ಹೆಜ್ಜೆಯ ನಲಿವ ಗೆಜ್ಜೆಗೆ
ನೃತ್ಯ ಭಂಗಿಯ ಉಳಿವ ಕಡೆದು
ಬೆಣ್ಣೆಯಂಮೃತ ರುಚಿಯ ಸೋಕಿಸಿ
ಅತಿಥಿ ಬರುವ ಹಾದಿ ಕರುಣಿಸಿ
ರಂಗವಲ್ಲಿಯ ಹರುಷ ಚಿತ್ರವ
ಬರೆದು ಉದಿಸುವ ಬಾ;

ಬಾ-ಬೆಳೆಯುವ
ಬಾ-ಮೆರೆಯುವ
ಬಾ-ಮರೆಯುವ ನಮ್ಮನೆ,
ಬಾ-ಬದುಕುವ
ಬಾ-ಅಲೆಯುವ
ಬಾ-ಮುರಿಯುವ ಸೆರೆಮನೆ.

1 comment:

Mandasmita said...

ಮಡಿಲ ಹರಡಿ ಹೃದಯ ಕೊಡವಿ ಪುಟಿವ ಭಾವದ ಅಣಿಯ ಮಾಡಿ
ದೇವನಾಲಯ ಬೆಳಕಿನಾರತಿ ಹೊಳೆಸಿ ಜೀವದ ಕಿರಣ ಪೋಣಿಸಿ
ಬಳಿವ ನಾವು ಬಣ್ಣ ಬಿತ್ತಿಯ ಬೆರಗುಗೊಳಿಸುವ ಬಾ... very good imagination! Admire your language strength.