Wednesday, October 14, 2009

ದೀಪರಂಗು

ಕುಂಕುಮದ ಕಂದರಿನ
ಕೆಂದಾವರೆಯ ಕಾವ್ಯದಿ
ಕಾವೇರದು ಆ
ರಂಗಿನಾ ಬುಗ್ಗೆಯಂತೆ,
ಅಂತರಂಗದ ರಂಗು
ಇಂಗಿಸುವಾ ಸಿಂಧೂರ
ಸಾವರಿಸುವ ರೀತಿ
ಪ್ರೇಮ ಸಿಂಧು.

ಬಿಂದು ಮಾಲಿನಿಯ
ಬಂಧನವು ಹಣೆಯ
ಹೆಣೆಯುತಿರಲದು
ಹಣೆಯಂತದಲಿ,
ಹಣೆಯೊಲುಮೆಯಾ
ಹಂದರದ ಹೂವಲಿ
ಸುಂದರ-ವಾಗುವುದು ಈ
ಕುಂದಣಾ ಕಲ್ಪವು.

ಸಿಂಗಾರಿಯವಳಿಗೆ
ಸಿಂಗಾರ ಸಂಗಮ
ಮುಂಜಾನೆ ರಂಗಿನಾ
ಮದರಂಗವು,
ಮುದಲೇಪದ ಪಥನ
ಮಧುಕರಿಯ ಮಿಲನ
ಮಧುಮಾಲೆಯಹುದು
ಹಣೆ ರಂಗಿನಲಿ.

ಸಂಗಮದಿ ಕರಗುವ
ಸೌಗಂಧದ ಸಾವರಿಕೆ
ಪಸರಿಕೆಯ ಪದಬಂಧ
ಪರಿಭ್ರಮಣ,
ತೇಲುವಾ ತವರಿಗೆ ಸೇರು ಸಿಂಧೂರ
ಸುಂದರಕೆ ಸೌಂದರ್ಯದ
ದೀಪರಂಗು!
ಅದುವೆ ಆ ದೀಪರಂಗು!

Monday, October 5, 2009

ಕರ್ಮ

ಸುಂದರ ಕಡಲೊಳು
ಸುಂದರ ನದಿಯಾ
ಮಿಲನವು ಸುಂದರವೆ?
ಅದುವೆ ಅಲ್ಲ, ಅದರಂತಲ್ಲ
ಕರಾಳವಾಗುವುದು.
ಕಡಲಿನ ಅಲೆಯು
ನದಿಯಾ ಸುಳಿಯು
ತಮ್ಮದೆ ಪ್ರಮುಖವ
ಸಾಧಿಸಲು;
ಏರುವ ಕಡಲೊಳು
ಸುರುಳುವ ನದಿಯೊಳು
ತೇಲುವ ಮಾನವ
ಜಲಪಾಲು.
ಇದರಾ ಮರ್ಮ
ಜೀವನ ಧರ್ಮ
ಏರುವ ಸುರುಳುವ
ಅವರದೆ ಕರ್ಮ.

Friday, October 2, 2009

ಸಾಧಕೋತ್ಸವ

ಸಾವಿರ ಸಲಹುವ ಸುಳಿವಿನ ಸಾವಿಗೆ
ನಾ ಬಲಿ, ನೀ ಬಲಿ, ಅವರಿವರಂತೆಯೆ
ನಿಗಿ ನಿಗಿ ಮಿರುಗುವ ಭುಗಿಲಿನ ಬಗೆಯಲಿ
ಬದುಕು ಸಾವಿರಗಳ ಉಪಸಂಹಾರ.

ಕೆಡಪಿನ ಬಳುಕದಿ ನಾವೊಡನಾಡಿ
ಸಂಧ್ಯಾರಾಗದ ಸುಗಂಧ ವೀರ್ಯ
ಕುಂದಣ ಕಡಲಿನ ಹೊಳಪಿನ ಕಂದುಕ
ಸೋಕಿ ಪುಟಿದಿಪ ಪ್ರಾಣದಾಹಿಮ.

ಅನುಸಂತ್ವಾನ ಅನುಭವಧೀಮ
ಏತನಮಧ್ಯೆಯ ಪ್ರವಾಸಪ್ರಧನ.

ಸಾವಿರ ಸಲುಹುವ ಸುಳಿವಿನ ಸಾವಿಗೆ
ನಾ ಬಲಿ, ನೀ ಬಲಿ, ಅವರಿವರಂತೆಯೆ
ಸುಂದರ ಸೆಳೆತದ ಪಂತದ ಪತನಕೆ
ಪತಾಕೆಯೆತ್ತುವಾ ವಿಜಯೋತ್ಸವ
ಈ ಸಮತೀರ್ಣ ಸಾಧಕೋತ್ಸವ.