Tuesday, August 9, 2011

ನಂದನವನ

ಕಂದನ ನಂದನವನದೊಳಗೆ
ಆಟಿಕೆಗಳು ಇಲ್ಲೆಲ್ಲ,
ಭುವಿಯಾಗಸ ತಾ ಚಂದಿರನು
ಚೆಂದದ ಕೈಗಳ ಚೆಂಡುಗಳು.
ಕಾರ್ಮುಗಿಲಾಗಸ ಕತ್ತಲೆಯು
ನಿದ್ರಾ ಮಂಪರು ಕನವರಿಕೆ
ಅಂಕಣದಾಗಸ ತಾರೆಗಳು
ಮಂಪರು ಕನಸಿನ ಚುಕ್ಕೆಗಳು,
ಆಗಸದಲ್ಲಿನ ಇವುಗಳನು
ಬಿಡಿಸಿಹಳ್ ತಾಯಿ ಅಂಗಳದಿ
ಬಗೆ ಬಗೆ ಅಂಕದ ರಂಗೋಲಿ.
ಬಾನಿನೊಳಗೆಯೇ ಕದ್ದೋಡಿ
ಭುವಿಯಾ ಮೇಲಿನ ಮೊಲವದುವೆ
ಬೆಣ್ಣೆಯಾಸೆಗೆ ಮೇಲೋಡಿ
ಚಂದಿರನೊಳಗೆಯೆ ಅಡಗಿಹುದು.
ಭುವಿಯಾ ಮೇಲ್ಗಣ ಚಿಟ್ಟೆಗಳು
ಎನ್ನೆಯ ಚೆಂದದ ಬಟ್ಟೆಗಳು
ಇಂತಿಹ ನಂದನವನವನ್ನೇ
ನೀಡಿಹ ದೇವಗೆ ನಮೋನಮೋ.

1 comment:

Anonymous said...

ಒಂದು ಪುಟ್ಟ ಮಗುವಿನ ಮುಗ್ಧ ಮಾತುಗಳಂತಿದೆ ಜೊತೆಗೆ the difference between reality and virtuality has been nicely expressed. GOOD POEM.