Wednesday, August 3, 2011

ಅಹುದೇ

ರಂಗನೇ ಬಾರದಿಹ
ಈ ಶೃಂಗ ಸಭೆಯಲಿ
ಕೊಳಲನೂದುವನಾರೆ?
ಮನ್ಮಥನಿರದ
ವಸಂತ ಕಾಲದಿ
ಪ್ರೇಮವು ಮೊಳೆಯುವುದೇ?

ಪ್ರೇಯಸಿ ಬಾರದ
ರಾತ್ರಿಗಳದುವೆ
ಶೀಘ್ರವಾಗಿಹುದೇ?
ಭುವಿ ಮೇಲ್ಮೆಯ ಜಲ
ಮೋಡಗಳಾಗದೆ
ಮಳೆ ತಾ ಬರಬಹುದೇ?

ಮಾವ್ಮರ ಚಿಗುರದೆ
ಕೋಗಿಲೆ ಕಂಠದ
ಸವಿದನಿ ಕೇಳುವುದೇ?
ಸುಂದರ ಸ್ವಪ್ನದ
ಅನಿಸಿಕೆ ಭವಿಸದೆ
ಪ್ರೀಣನ ನನಸಿಹುದೇ?

ಈ ಜನ್ಮದ ಸಿರಿ
ಸಿರಿ ಜಲವಾಗದೆ
ಅಲೆಗಳು ಬರಬಹುದೇ?
ಈ ಪ್ರೇಮದ ಫಲ
ಫಲವತ್ತಾಗದೆ
ಪ್ರೇಯಸಿ ನೀನಹುದೇ?

2 comments:

Anonymous said...

ನಿಮ್ಮ ಮೂರು ಕವಿತೆಗಳು, "ಬಾ..", "ಸಾಕ್ಷಿಬೇಕೆ" ಮತ್ತು "ಅಹುದೇ" ಒಂದೇ ಧಾಟಿಯಲ್ಲಿದೆ. ಅಥವಾ ಒಂದೇ ಭಾವನೆಯನ್ನು ವ್ಯಕ್ತ ಪಡಿಸುತ್ತವೆ. ಇದಕ್ಕೆ ಎನಾದರೂ ವಿಶೇಷ ಕಾರಣಗಳಿದೆಯೇ?! like time of the year, state of mind, state of life.... etc. Sometimes, some subject occupies the mind so much that one cannot think of anything else or does not want to think of anything else!

Pani Murthy said...

Hmmm... Interesting. All these poems were written in different periods of time. I guess, latent feelings keep coming back as waves at the shore. How many touch our feet is important to realize the efficacy of them. Thanks for the feedback.