Thursday, September 29, 2011

ಹಳೆಯ ಹಾಡು

ಬಾಂದಳ ವೃಂದದ
ಅಸ್ತಮ ಉದಯದಿ
ದಿನಕಳೆದಂತದಿ
ಕರಗುವ ರಾತ್ರಿಯು,
ತಿಂಗಳ ಕಳೆದಿರೆ
ಮುಂಬರೆ ಋತುಗಳು
ಬಗೆ ಬಗೆ ಭಾವನೆ
ಋತು ಕವನ,
ಅಂತೆಯೆ ನನ್ನೆಯ
ಎದೆಯೊಳಗಿರುವ
ಕಾಲಕೆ ಹೊಂದುವ
ಹಳೆ ಹಾಡು.
ಬೇಸಗೆ ಬಿಸಿಲಿನ
ಮೈ ಕೊರೆಯುವ ಛಳಿ
ಚೈತ್ರದಲ್ಲಿನಾ ಕೋಗಿಲೆಯು,
ನನ್ನೊಡನಿರುವ
ಈ ಬಗೆ ಪಂತಕೆ
ನನ್ನೆಯ ಹಳೆಯ
ಜೀವನ ಸ್ಮರಣ
ನನ್ನೆಯ ಹಣೆಬರ
ಹನಿಗವನ.

1 comment:

Mandasmita said...

ಇಲ್ಲಿ ’ಹಣೆಬರಹ’ ಸರಿಯಾಗಿ ಹೊಂದುತ್ತಿಲ್ಲ. ನಿರಾಶೆ ಭಾವ ತೋರುವಂತಿದೆ. ಅದರ ಬದಲು ’ಹುರುಪಿನ’ ಅಥವ ’ಹರುಷದ’ ಇದ್ದಿದ್ದರೆ ಚೆನ್ನಾಗಿ ಅನ್ನಿಸುತಿತ್ತು...